‘ಲೈಫ್ ಈಸ್ ಬ್ಯೂಟಿಫುಲ್’

 

 

 

 

 

 

 

 

 

 

 

ನಮ್ಮ ಕಾಲೇಜಿನ ವಿದ್ಯಾರ್ಥಿನಿಯಾದ ಪೂಜಾ.ಎನ್, ಜೋಗಿಯವರಲೈಫ್ ಈಸ್ ಬ್ಯೂಟಿಫುಲ್ಎಂಬ ಪುಸ್ತಕದ ಬಗ್ಗೆ ಬರೆದ ಒಂದು ವಿಮರ್ಶೆಯು ಪ್ರೇರಣ ಸಂಘದ ಶ್ಲಾಘನೆಗೆ ಪಾತ್ರವಾಯಿತು. ಅವರು ಬರೆದ ವಿಮರ್ಶೆಯನ್ನು ಕೆಳಗೆ ಪ್ರಕಟಿಸಲಾಗಿದೆ. ಅವರ ಪ್ರತಿಭೆ ಮತ್ತಷ್ಟು ಉನ್ನತ ಮಟ್ಟಕ್ಕೇರಲಿ ಹಾಗು ಶುಭವಾಗಲಿ ಎಂದು ಹಾರೈಸೋಣ.

ದಯವಿಟ್ಟು ಪುಸ್ತಕವನ್ನು ಓದಬೇಡಿಹೀಗೆಂದು ನಾನು ಹೇಳ್ತಿಲ್ಲ, ಪುಸ್ತಕದ ಲೇಖಕರೇ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ. ‘ಅಂಥಾದ್ದೇನಿದೆ ಪುಸ್ತಕದಲ್ಲಿ ?ಎಂಬ ಕುತೂಹಲವನ್ನೂಓದಿಯೇ ನೋಡೋಣಎಂಬ ಹುಮ್ಮಸ್ಸನ್ನೂ ಓದುಗರಲ್ಲಿ ಹುಟ್ಟಿಸುವ ಬರಹಗಾರರಾದ ಜೋಗಿಯವರ ಕಲೆಯನ್ನು ಮೆಚ್ಚಲೇಬೇಕು.

ಬದುಕು ಸುಂದರ, ವಿಸ್ಮಯ, ನಿಗೂಢ, ಅಮೋಘ . . . ಹೀಗೆ ಹಲವಾರು ರಸಸ್ವಾದಗಳನ್ನೊಳಗೊಂಡ ಒಂದು ರುಚಿಕರವಾದ ಅಡುಗೆ. ಇದರಲ್ಲಿ ಉಪ್ಪು, ಹುಳಿ, ಖಾರ, ಕಹಿ ಇವೆಲ್ಲ ಇದ್ದರೇನೇ ಮೃಷ್ಠಾನ್ನ ಭೋಜನ ಸಂಪೂರ್ಣ ಎನಿಸುವುದು. ಇದನ್ನರಿಯದ ನಾವು ಎಷ್ಟೋ ಬಾರಿ ಜೀವನದ ಸಿಹಿ ಕ್ಷಣಗಳ ಸವಿ ಸವಿಯಲು ವಿಫಲರಾಗುತ್ತೇವೆ. ಅದಕ್ಕಾಗಿಯೇ ಜೋಗಿಯವರು ಪುಸ್ತಕದ ಮುಖಪುಟದಲ್ಲೇ ಜೀವನ ಸುಂದರವಾಗಿದೆ, ‘ಕಣ್ಣ್ ಬಿಟ್ಟ್ ನೋಡ್ರೀಎಂದು ಎಚ್ಚರಿಸಿದ್ದಾರೆ.

ಪುಸ್ತಕವು ಗಂಟೆಗಟ್ಟಲೆ ಮೊಬೈಲು ಹಿಡಿದುಕೊಂಡು ಫೇಸ್ ಬುಕ್ ನೋಡುತ್ತಾ ವಾಟ್ಸಪ್ ಮಾಡುತ್ತಾ ಇದಿಷ್ಟೆ ನಮ್ಮ ಲೋಕ ಎಂಬ ಭ್ರಮೆಯಲ್ಲಿ ಬದುಕುವವರಿಗಲ್ಲ. ಬದಲಿಗೆ ಇದರಾಚೆಗಿರುವ ಸುಂದರ ಪ್ರಪಂಚದ ಕುತೂಹಲಕಾರಿ ವಿಷಯಗಳನ್ನರಿವ ಜಿಜ್ಞಾಸೆ ಉಳ್ಳವರಿಗೆ. ಇಲ್ಲಿ ಬಳಸಿರುವ ಭಾಷೆ ಸುಲಭವಾಗಿದ್ದರೂ ಕವಿ ನಮಗೆ ಹೇಳ ಬಯಸುವ ಒಳಾರ್ಥವನ್ನರಿಯಲು ಸ್ವಲ್ಪ ತರ್ಕಬದ್ಧವಾಗಿ ಯೋಚಿಸಲೇಬೇಕು. ಇಲ್ಲಿ ಲೇಖಕರು ಸಣ್ಣ ಸಣ್ಣ ಕಥೆಗಳ ಮೂಲಕ ನಮಗೆ ಜೀವನದ ಬಗ್ಗೆ ಉಪದೇಶ ನೀಡಿದ್ದಾರೆಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು.ಇಡೀ ಪುಸ್ತಕದಲ್ಲಿ ಹುಡುಕಿದರೂ ನಿಮ್ಮ ತಲೆಗೆ ಬರುವ ಒಂದು ಪ್ರಶ್ನೆಗೂ ನಿಖರವಾದ ಉತ್ತರ ಸಿಗುವುದಿಲ್ಲ, ಇಲ್ಲಿ ಲೇಖಕರು ಕೇವಲ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗಳಿಗೆ ನಾವು ಕಂಡುಕೊಳ್ಳುವ ಉತ್ತರವನ್ನು ಪರಿಶೀಲಿಸಿ ಅದಕ್ಕೆ ತಕ್ಕ ಅಂಕಗಳನ್ನು ಕೊಡುವುದು ನಮ್ಮ ಜೀವನ.

ವಿದ್ಯಾಭ್ಯಾಸಪ್ರಾಮಾಣಿಕತೆ, ಪ್ರೀತಿಮದುವೆ, ನಂಬಿಕೆದ್ರೋಹ ಹೀಗೆ ಹಲವು ವಿಷಯಗಳ ಕುರಿತು ಸಾಂಕೇತಿಕವಾಗಿ ನಡೆಸಿರುವ ಚರ್ಚೆಯ ಮುಖ್ಯ ಉದ್ದೇಶವನ್ನು ಅರಿತು ಬಾಳಿದರೆ ಹಾಗು ಬಾಳಿನಲ್ಲಿ ಕೆಲವು ಬದಲಾವಣೆಗಳನ್ನು ತಂದರೆ ಬಹುಶಃ ಇಷ್ಟು ದಿನ ನಾವು ಬದುಕಿನತ್ತ ನೋಡುತ್ತಿದ್ದ ದೃಷ್ಟಿಕೋನವನ್ನು ಬದಲಿಸುತ್ತೇವೆ. “ಬೆಚ್ಚನಾ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ, ಇಚ್ಛೆಯನರಿತು ನಡೆವ ಸತಿಯಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞಎಂಬ ಕವಿವಾಣಿಯಂತೆ ಎಲ್ಲೋ ಇರುವ ಸ್ವರ್ಗಲೋಕದ ಬೆನ್ನಟ್ಟಿ ಹೋಗುವ ಬದಲು ಇಲ್ಲೇ ಇರುವ ಭುವಿಯನ್ನು ಸ್ವರ್ಗವನ್ನಾಗಿಸಿ ಎಂಬ ಒಳಾರ್ಥವನ್ನೊಳಗೊಂಡ ಹೊತ್ತಿಗೆಯನ್ನು ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು ಬಯಸುವ ಹೊತ್ತಿಗೆ ಮೆತ್ತಗೆ ಓದಿ ಓಲೈಸಿ . . . .

ಪ್ರೇರಣ ಸಂಸ್ಥೆ,

ಪೂಜಾ. ಎನ್.

2 CAMS K

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s